ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರ್ಥಶೋಧ, ಅನ್ವಯ, ಮಧ್ಯಮ ಪಥ, ಬದುಕಿಗಾಹಿ ಶಿಕ್ಷಣ, ಯುವ ಮನಸ್ಸಿನ ಮೆಟ್ಟಿಲುಕಲಿಕೆಯ ನಡೆ, ಮೂರನೆಯ ಇರುವು ಇನ್ನೂ ಮುಂದತಾವು ಇವರ ವೈಚಾರಿಕ ಕೃತಿಗಳು ಬಿಟ್ಟರೆ ಸಿಕ್ಕದು (ಹಾಸ್ಯ ಬರಹ ಸಂಕಲನ) ಸಾರ್ವಜನಿಕ ಆಡಳಿತ, ಪ್ರೌಢ ಶಿಕ್ಷಣ ನಿರ್ವಹಣಾ ಮನೋವಿಜ್ಞಾನ, ಎರಡು ತಲೆಮಾರು, ಮುಕ್ತ ಹಂಸ, ಸುಧಾರಕರು, ಮಹಾಭಾರತದ ಮಹಾ ಪಾತ್ರಗಳು ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಬದುಕಿಗಾಗಿ ಶಿಕ್ಷಣ ಎಂಬ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಮನಸಾ ಜಂಟಿಯಾಗಿ ನೀಡುವ ಅರಳು ಪ್ರಶಸ್ತಿ ಬಂದಿದೆ. ಇಲ್ಲದ ತೀರದಲ್ಲಿ ಕೃತಿಗೆ 2009 ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಬಂದಿದೆ. ಹಾಗೂ ಬಳ್ಳಾರಿಯ ಡಾ. ಸುಭಾಸ್ ಭರಣಿ ಸಾಂಸ್ಕ್ರತಿಕ ವೇದಿಕೆಯ ಡಾ. ಎಚ್ ನರಸಿಂಹಯ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಶಿಕ್ಷಕರ ಪ್ರತಿಭಾ ಪರಿಷತ್ ನಿಂದ ಶಿಕ್ಷಣ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಇವರು ಬರೆದ ಬರಹಗಳು ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎಸ್ಸಿ, ಬಿ.ಕಾಂ, ಪಠ್ಯಗಳಿಗೆ ಸೇರಿವೆ.