Amish Tripath

Amish Tripath

ಅಮಿಶ್ ತ್ರಿಪಾಠಿ ಭಾರತೀಯ ಲೇಖಕರು. ಇವರ ಪುಸ್ತಕಗಳಾದ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹ, ದಿ ಸೀಕ್ರೆಟ್ ಆಫ್ ದಿ ನಾಗಾಸ್, ದಿ ಓತ್ ಆಫ್ ದಿ ವಾಯುಪುತ್ರಾಸ್ ರಾಷ್ಟ್ರೀಯ ಬೆಸ್ಟ್ಸೆಲ್ಲರ್ಗಳಾಗಿವೆ ಈ ಮೂರು ಪುಸ್ತಕಗಳು ಒಟ್ಟಾಗಿ ಶಿವ ಟ್ರೈಲಾಜಿಯಾಗಿದೆ. ಶಿವ ಟ್ರೈಲಾಜಿ ಪುಸ್ತಕಗಳು ಭಾರತೀಯ ಪ್ರಕಟಣೆಯ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಮಾರಟವಾಗುತ್ತಿರುವ ಪುಸ್ತಕ ಸರಣಿಯಾಗಿ, ೨ ಮಿಲಿಯನ್ ಪ್ರತಿಗಳು ಪ್ರಕಟಣೆಯಾಗಿ ರೂ.೫೦೦ ಮಿಲಿಯನ್ರಷ್ಟು ಮಾರಾಟವಾಗಿವೆ. ೨೦೧೨ ಮತ್ತು ೨೦೧೩ರಲ್ಲಿ ಭಾರತದ ಟಾಪ್ ೧೦೦ ಸೆಲೆಬ್ರಿಟಿ ಪಟ್ಟಿಯಲ್ಲಿ ಫೋರ್ಬ್ಸ್ ಪುರವಣಿಯು ಇವರ ಹೆಸರನ್ನು ಪ್ರಕಟಿಸಿದೆ.
ಇವರ ಪುಸ್ತಕಗಳನ್ನು ಭಾಷಾಂತರಿಸಲಾಗಿದೆ. ಇಮ್ಮಾರ್ಟಲ್ಸ್ ಆಫ್ ಮೆಲುಹ ೧೨ ಭಾಷೆಗಳಲ್ಲಿ ಲಭ್ಯವಿದೆ, ಸೀಕ್ರೆಟ್ ಆಫ್ ದಿ ನಾಗಾಸ್ ೭ ಭಾಷೆಗಳಲ್ಲಿ ಹಾಗು ಓತ್ ಆಫ್ ದಿ ವಾಯುಪುತ್ರಾಸ್ ೩ ಭಾಷೆಗಳಲ್ಲಿ. ಇದರ ಜತೆಗೆ ಶಿವ ಟ್ರೈಲಾಜಿಯ ಚಿತ್ರೀಕರಣದ ಹಕ್ಕುಗಳನ್ನು ಕರಣ್ ಜೋಹರ್ರವರ ಧರ್ಮ ಪ್ರೊಡಕ್ಷನ್ಸ್ಗೆ ಮಾರಿದ್ದಾರೆ.

Books By Amish Tripath