ಶ್ರೀಮದ್ ಅಭಯ ಚರಣ್, ‘ಭಕ್ತಿವೇದಾಂತ ಸ್ವಾಮಿ ಪ್ರಭುಪಾದ’ (ಶ್ರೀಲ ಪ್ರಭುಪಾದ) ರು, ಶ್ರೀ ಚೈತನ್ಯ ಮಹಾಪ್ರಭುಗಳ ತತ್ವಗಳನ್ನು ಜಗತ್ತಿಗೆ ಪ್ರಚಾರಮಾಡಲು ತಮ್ಮ ಇಳಿಯವಯಸ್ಸಿನಲ್ಲೂ ಜಗತ್ತಿನಲ್ಲೆಲ್ಲಾ ಪ್ರಸಾರ ಮಾಡಿ ತಮ್ಮ ಜೀವನದ ಉದ್ದಿಶ್ಯವನ್ನು ಸಾಧಿಸಿದರು. 1939 ರಲ್ಲಿ, ಗೌಡೀಯ ಸಮುದಾಯದ ಹಿರಿಯರು ಅಭಯ ಚರಣರವಿಂದ (ಎ. ಸಿ.) ಅವರಿಗೆ “ಭಕ್ತಿವೇದಾಂತ” ಎಂಬ ಬಿರುದು ನೀಡಿ ಗೌರವಿಸಿದರು.