Yandamuri Veerendranath

Yandamuri Veerendranath

ಇವರು ತೆಲುಗಿನ ಖ್ಯಾತ ಲೇಖಕರು. ಇವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಯಂಡಮೂರಿ ವೀರೇಂದ್ರನಾಥರು ತೆಲುಗು ಭಾಷೆಯ ಖ್ಯಾತ ಲೇಖಕರಾದರೂ ತಮ್ಮ ಅನುವಾದಿತ ಕೃತಿಗಳಿಂದಲೇ ಕನ್ನಡ ಸಾಹಿತ್ಯಕ್ಕೂ ತೀರಾ ಚಿರಪರಿಚಿತ. ಪ್ರತಿಯೊಬ್ಬ ಪುಸ್ತಕ ಪ್ರೇಮಿಯೂ ಅವರ ಒಂದಿಲ್ಲೊಂದು ಕೃತಿಯನ್ನು ಓದಿ, ಮೆಚ್ಚಿಯೇ ಇರುತ್ತಾರೆ. ವೈಜ್ಞಾನಿಕ ವಿಷಯಗಳಿಂದ ಹಿಡಿದು ಮನಃಶಾಸ್ತ್ರದವರೆಗೆ ಲೀಲಾಜಾಲವಾಗಿ ಬರೆಯುವ ಲೇಖಕರೇನಾದರೂ ಇದ್ದರೆ ಅವರು ಯಂಡಮೂರಿಯವರೇ. ತಮ್ಮ ವಿಭಿನ್ನ ಬರಹದ ಶೈಲಿ, ಭಾಷಾ ಲಾಲಿತ್ಯದಿಂದ ಕಿರಿಯರಿಂದ ಹಿರಿಯರವರೆಗೂ ಎಲ್ಲರ ಮನಗೆದ್ದವರು.
ಭಾಷೆಯ ಎಲ್ಲೆಯನ್ನು ಬದಿಗಿಟ್ಟರೆ ಭಾರತೀಯ ಲೇಖಕರಲ್ಲೇ ವಿಶಿಷ್ಟವಾಗಿ ನಿಲ್ಲಬಲ್ಲ ಬರಹಗಾರ. ಕನ್ನಡನಾಡಿನಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಗುಂಪು ಅವರ ಸಾಹಿತ್ಯ ಪ್ರಿಯರು ಒಂದು ಕಡೆ ಸೇರಿ ಆರೋಗ್ಯಕರ ಚರ್ಚೆಗೆ, ವಿಮರ್ಶೆಗೆ ತೊಡಗಲೆಂಬ ಆಶಯದಿಂದ ಹುಟ್ಟಿಕೊಂಡಿದೆ.

Books By Yandamuri Veerendranath