Yashvant Sirdeshpande

Yashvant Sirdeshpande

ಯಶವಂತ ಸರದೇಶಪಾಂಡೆಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ೧೩.೦೬.೧೯೬೫ರಲ್ಲಿ. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ.

ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಈಗ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಿದ್ದಾರೆ. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದಾರೆ. ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮುಖಾಂತರ ಕರ್ನಾಟಕದಾದ್ಯಂತ ಮನೆಮಾತಾಗಿರುವ ಯಶವಂತ ಸರದೇಶಪಾಂಡೆಯವರು.

 

Books By Yashvant Sirdeshpande