ಕತೆಗಾರ ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ’ ಪಡೆದ ಪ್ರತಿಭಾವಂತ ಲೇಖಕ. ಮೂಲತಃ ಕುಂದಾಪುರವರಾದ ವಿಕ್ರಮ್ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಜೀರೋ ಮತ್ತು ಒಂದು’, ‘ಅಕ್ಷೀ ಎಂದಿತು ವೃಕ್ಷ’, ‘ನೀ ಮಾಯೆಯೋಳಗೋ’ ಹಾಗೂ ‘ಹಮಾರಾ ಬಾಜಾಜ್’ ಇವರ ಪ್ರಮುಖ ಕೃತಿಗಳಾಗಿವೆ.
ವೀರಲೋಕದ 63ನೇ ಕೃತಿ ವಿಕ್ರಮ್ ಹತ್ವಾರ್ ಅವರ “ಕಾಗೆ ಮೇಷ್ಟ್ರು”… ಝೀರೋ ಮತ್ತು ಒಂದು’ ಹಾಗು ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನದಿಂದ ಓದುಗರನ್ನು ಸೆಳೆದಿರುವ ವಿಕ್ರಮ ಹತ್ವಾರ್, ಕನ್ನಡದ ಅನನ್ಯ ಕತೆಗಾರ ಮತ್ತು ಕವಿ. ಹೊಸ ಭಾಷೆ, ವಿಶಿಷ್ಟ ವಸ್ತು-ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಯುಗದ ಪಲ್ಲಟಗಳು, ಜಾಗತೀಕರಣ ಸಂದರ್ಭದಲ್ಲಿನ ಮನುಷ್ಯ ಸಂಬಂಧಗಳು, ದ್ವಂದ್ವಗಳು, ಆಧುನಿಕ ಮನುಷ್ಯನ ಸಂಕಟ ತವಕ-ತಾಕಲಾಟ ಹುಡುಕಾಟ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಮೌಲ್ಯ – ಇವು ವಿಕ್ರಮ ಹತ್ವಾರರ ಕತೆಗಳಲ್ಲಿ ವಿಮರ್ಶಕರು ಗುರುತಿಸಿರುವ ಕೆಲವು ವಿಶೇಷತೆಗಳು.