
Sudha Adukala
ಸುಧಾ ಆಡುಕಳ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರಾದ ಶ್ರೀಮತಿ ಸುಧಾ ಆಡುಕಳ ಅವರು ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ‘ಬಕುಲದ ಬಾಗಿಲಿನಿಂದ’ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ. ‘ಒಂದು ಇಡಿಯ ಬಳಪ’ ಪ್ರಕಟಿತ ಕಥಾಸಂಕಲನ. ಇವರು ಅನುವಾದಿಸಿದ ‘ಮಗುವಿನ ಭಾಷೆ ಮತ್ತು ಶಿಕ್ಷಕ’ ಕೃತಿಯು ದೆಹಲಿಯ ನ್ಯಾ಼ಶನಲ್ ಬುಕ್ ಟ್ರಸ್ಟ್ನಿಂದ ಪ್ರಕಟಗೊಂಡಿದೆ. ಕಥೆ, ಕವನ, ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವಧಿ ಸೇರಿದಂತೆ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಸುಧಾ ಅವರು ‘ಬಕುಲದ ಬಾಗಿಲಿನಿಂದ’ ಎಂಬ ಲೇಖನ ಸಂಕಲನವನ್ನು ಪ್ರಕಟಿಸಿದ್ದಾರೆ. ಯಶವಂತನ ಯಶೋಗೀತೆ, ಹದಿಹರೆಯದ ಕನಸುಗಳೊಂದಿಗೆ, ಮಗುವಿನ ಭಾಷೆ ಮತ್ತು ಶಿಕ್ಷಕ, ಮಕ್ಕಳ ಟ್ಯಾಗೋರ್ ಅವರ ಮತ್ತಿತರ ಕೃತಿಗಳು. ಅವರಿಗೆ 2019ನೇ ಸಾಲಿನ ಅಮ್ಮ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪ್ರಶಸ್ತಿ, ಉಡುಪಿಯ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಬಕುಲದ ಬಾಗಿಲಿನಿಂದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ
-
NEELI MATTU SEBU | ನೀಲಿ ಮತ್ತು ಸೇಬು
0₹180.00Original price was: ₹180.00.₹171.00Current price is: ₹171.00.Qty