Shashidhara Haladi

Shashidhara Haladi

ಶಶಿಧರ ಹಾಲಾಡಿ ಅವರು ಲೇಖಕರು. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಮೈಸೂರು ವಿ.ವಿ.ಯಿಂದ ಎಂ.ಎ. (ಕನ್ನಡ)  ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್‍ ಪಡೆದಿದ್ದು, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದಾರೆ. ಶಿವಮೊಗ್ಗದ ನಾವಿಕ ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರು.  ಪರಿಸರ , ಪಕ್ಷಿವೀಕ್ಷಣೆ, ಚಾರಣ (ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ
ಛಾಯಾಗ್ರಹಣ (ರಾಜ್ಯ ಮಟ್ಟದ ಲ್ಯಾಂಡ್‍ಸ್ಕೇಪ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ), ಅಂಕಣ ಬರಹ, ಸಣ್ಣ ಕಥೆ ರಚನೆ ಇವರ ಆಸಕ್ತಿಯ ಕ್ಷೇತ್ರಗಳು.

ಕೃತಿಗಳು : ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್ ಕುರಿತು ಜೀವನ ಚರಿತ್ರೆ, ಹಿತ್ತಲಿನಿಂದ ಹಿಮಾಲಯಕ್ಕೆ (ಚಾರಣ ಬರಹಗಳು).  ಅಮ್ಮಮ್ಮನ ದೀಪಾವಳಿ, ಕಾಲಕೋಶ (ಕಾದಂಬರಿ), ಪ್ರಕೃತಿ ಪ್ರಪಂಚ (ಅಂಕಣ ಬರಹಗಳು)., ದೇವರು ಎಚ್ಚರಗೊಂಡಾಗ (ಪ್ರವಾಸ ಕಥನ), ಟುವ್ವಿ ಹಕ್ಕಿಯ ಗೂಡು (ಪರಿಸರ ಸಂಬಂಧಿ ಬರಹಗಳು)., ಓಲಿ ಕೊಡೆ (ಅಂಕಣ ಬರಹಗಳು), ಅಮ್ಮಮ್ಮನ ದೀಪಾವಳಿ (ಪ್ರಬಂಧಗಳು), ಸರ್ ಬೆನಗಲ್ ನರಸಿಂಗ ರಾವ್ (ವ್ಯಕ್ತಿ ಪರಿಚಯ), ಮನದ ಹಾಯಿದೋಣಿ (ಅಂಕಣ ಬರಹಗಳು).

 

Books By Shashidhara Haladi