Madhukar Balkur

Madhukar Balkur

ಮಧುಕರ್ ಬಳ್ಕೂರು ಅವರು ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದವರಾಗಿದ್ದು, ವಾಣಿಜ್ಯ ಶಿಕ್ಷಣದ (ಬಿಕಾಂ) ನಂತರ ಬೆಂಗಳೂರಿನ ನಾರಾಯಣ ನೇತ್ರಾಲಯ ಮತ್ತು ಮಹಾವೀರ್ ಜೈನ್ ಹಾಸ್ಪಿಟಲ್‌ನ ಅಕೌಂಟ್ಸ್ ವಿಭಾಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕೊರೊನಾ ಮಹಾಮಾರಿಯ ಬಳಿಕ ಅವರು ಸ್ವ ಉದ್ಯೋಗಕ್ಕೆ ಪ್ರವೇಶಿಸಿ ತಮ್ಮದೇ ಆದ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ.

ಬರವಣಿಗೆ ಮತ್ತು ನಟನೆ ಇವರ ಮುಖ್ಯ ಹವ್ಯಾಸಗಳಾಗಿದ್ದು, “ನಿಮ್ಮೆಲ್ಲರ ಮಾನಸ,” “ಓ ಮನಸೇ,” “ಮಿಂಚುಳ್ಳಿ” ಮಾಸಪತ್ರಿಕೆಗಳು ಸೇರಿದಂತೆ “ಉದಯವಾಣಿ ಫ್ಯೂಷನ್,” “ಅವಧಿ,” “ಪಂಜು,” ಮತ್ತು “ಸಂಗಾತಿ” ಆನ್‌ಲೈನ್ ಮ್ಯಾಗಜಿನ್‌ಗಳಲ್ಲಿ ಅವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

ಪ್ರಮುಖ ಕೃತಿಗಳು:

  • “ಆಸೆಗಳು ಕನಸಾಗಿ ಬದಲಾಗಲಿ”
  • “ಆಲ್ಕೆರೆ ಜಡ್ಡು”

ಅವರ ಬರವಣಿಗೆಗೆಯಲ್ಲಿ ಬದುಕಿನ ನೈಜತೆ, ಅನುಭವದ ಆಳ, ಹಾಗೂ ಭಾವನಾತ್ಮಕ ವೈವಿಧ್ಯತೆ ಕಾಣಬಹುದು.

Books By Madhukar Balkur