ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂಲಕ ಜನಸಾಮಾನ್ಯರಲ್ಲಿರುವ ಮೂಢನಂಬಿಕೆಗಳ ನಿರ್ಮೂಲನೆಗೆ ತಮ್ಮ ವೈಯಕ್ತಿಕ ಮಟ್ಟದಲ್ಲಿ ಹೋರಾಟ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಘಟನೆಗಳೊಂದಿಗೆ ಕೈಜೋಡಿಸಿ, ಸಾಮಾಜಿಕ ವೈಜ್ಞಾನಿಕತೆಗಾಗಿ ಶ್ರಮಿಸುತ್ತಿರುವ ಅವರು, ಈ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದರು.
ಇವರ ಪ್ರಮುಖ ಕೃತಿಗಳಲ್ಲಿ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ (ಭಾಗ-1) ಮತ್ತು ನೀವೂ ಮಾಡಿ ಪವಾಡ (ಭಾಗ-2)ಮುಂತಾದವುಗಳನ್ನು ಒಳಗೊಂಡಿವೆ.