Girimane Shyaama Rao

Girimane Shyaama Rao

ಗಿರಿಮನೆ ಶ್ಯಾಮರಾವ್ ಅವರು ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ಓದುಗರಿಗೆ ಚಿರಪರಿಚಿತರು. ಅವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗಾಣದಹೊಳೆ ಗ್ರಾಮ.

ಪತ್ನಿ: ಶಶಿಕಲಾ, ಪುತ್ರ: ಚೇತನ್ ಶರ್ಮ.

ಕೃಷಿಕನಾಗಿ 35 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಅವರು, ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ವೈವಿಧ್ಯತೆ, ಮನುಷ್ಯರ ಮನೋಭಾವನೆಗಳ ಅವಲೋಕನ, ಮತ್ತು ವೈಜ್ಞಾನಿಕ ದೃಷ್ಟಿಯಿಂದ ವೇದಗಳ ಆಳವಾದ ಅರಿವು ಇವೆಲ್ಲದರತ್ತ ತೀವ್ರ ಕುತೂಹಲ ಹೊಂದಿದ್ದಾರೆ. ಈ ಆಸಕ್ತಿಗಳೇ ಅವರನ್ನು ಸಾಹಿತ್ಯ ರಚನೆಯತ್ತ ಸೆಳೆದವು.

ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿರುವ ಗಿರಿಮನೆ ಶ್ಯಾಮರಾವ್, ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಸೇರಿದಂತೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಒಟ್ಟು 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

Books By Girimane Shyaama Rao