G M Krishna Moorthi

G M Krishna Moorthi

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಮತ್ತು ವಿಮರ್ಶಕರು. ಅವರು ಮಹಾಭಾರತದ ಪ್ರಮುಖ ಪಾತ್ರಗಳಾದ ಪಿತಾಮಹ ಭೀಷ್ಮ, ಬಲಶಾಲಿ ಭೀಮಸೇನ, ಛಲಗಾರ ದುರ್ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀಕೃಷ್ಣ, ಶೋಕತಪ್ತ ತಾಯಿ ಕುಂತಿ, ಕುರುಡ ಅರಸ ಧೃತರಾಷ್ಟ್ರ ಮತ್ತು ಹಿರಿಯ ಪಾಂಡವ ಧರ್ಮರಾಯರ ಕುರಿತಾಗಿ ಸಾಹಿತ್ಯ ರಚಿಸಿದ್ದಾರೆ. ಇದಲ್ಲದೆ, ಅವರು ವಿಜ್ಞಾನ ಸಂಬಂಧಿತ ವಿಚಾರಗಳ ಕುರಿತಾದ ಲೇಖನಗಳನ್ನು ಕೂಡಾ ಬರೆದಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ರಾಜಾಜಿನಗರದಲ್ಲಿ ವಾಸಿಸುತ್ತಿದ್ದಾರೆ.

ಕೃತಿಗಳು:
ಸ್ವಂತ ಉದ್ಯಮ ಆರಂಭಿಸುವುದು ಹೇಗೆ?, ಭಗವಾನ್ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವಜ್ಞಾನ ಕೋಶ (ಸರಣಿಗಳು), ಜನಪದ ಸಂಸ್ಕೃತಿಯ ಮಹಾ ಸಾಹಿತಿ: ಚಂದ್ರಶೇಖರ ಕಂಬಾರ, ಇವರೆಲ್ಲರೂ ಭಾರತ ರತ್ನರು, ಭಾಷಣಕಲೆ, ವಾತ್ಸಾಯನ ಕಾಮಸೂತ್ರ, ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ, ಅಂಬೇಡ್ಕರ್, 51 ಸರಳ ವಿಜ್ಞಾನ ಪ್ರಬಂಧಗಳು, ಮೋಹನದಾಸ ಕರಮಚಂದ ಗಾಂಧಿ (ಆತ್ಮಕಥೆ), ಯಶಸ್ಸಿನ ಮೆಟ್ಟಿಲುಗಳು, 101 ಪಂಚತಂತ್ರ ಕಥೆಗಳು, ಅಥೆನ್ಸ್‌ನ ಟೈಮನ್, ಮರೆತು ಹೋಗಿರುವ ಮಹಾನಗರಗಳು, ನನ್ನ ಕನಸಿನ ಭಾರತ (ಅನುವಾದ), ಜ್ಞಾನಪೀಠ ಪುರಸ್ಕೃತ ಕನ್ನಡದ ಸಾಹಿತಿಗಳು, ಒಂದು ಜೀವನ ಚರಿತ್ರೆ (ಕಥಾಸಂಕಲನ), ವಿಶ್ವ ವಿಖ್ಯಾತ ಪುರಾಣಗಳು (ಅನುವಾದ), ಮಹಾರಾಷ್ಟ್ರದ ಜಾನಪದ ಕತೆಗಳು (ಅನುವಾದ), ಬಂಗಾಳದ ಜಾನಪದ ಕಥೆಗಳು (ಅನುವಾದ) ಹಾಗೂ ಹಲವಾರು ಇತರ ಕೃತಿಗಳನ್ನು ರಚಿಸಿದ್ದಾರೆ.

Books By G M Krishna Moorthi