ಕನ್ನಡ, ತುಳು, ಹವ್ಯಕ ಭಾಷೆಯ ಲೇಖಕರಾಗಿದ್ದು ತುಳು ಮಂಗಳೂರು ಆಕಾಶವಾಣಿಯಲ್ಲಿ ಹಂಗಾಮಿ ನಿರೂಪಕರು. ತುಳು,ಕನ್ನಡ ಹಾಗೂ ಹವ್ಯಕ ಭಾಷೆಗಳಲ್ಲಿ ಕಾದಂಬರಿ, ನಾಟಕ, ಪ್ರಬಂಧ, ಕವನ, ಕಥೆಗಳು ಪ್ರಕಟಗೊಂಡಿವೆ.
ಹವ್ಯಕ ಕತೆಗಳಿಗಾಗಿ ಕೊಡಗಿನ ಗೌರಮ್ಮ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದ ದತ್ತಿನಿಧಿ, ಕರಾವಳಿ ವಾಚಕಿಯರ ಲೇಖಕಿಯರ ಸಂಘದ ದತ್ತಿನಿಧಿ ಪಡೆದುಕೊಂಡಿದ್ದಾರೆ.
ತುಳು ಸಾಹಿತ್ಯಕ್ಕಾಗಿ ಪೂವರಿ ತುಳು ಸಾಹಿತ್ಯ ಪ್ರಶಸ್ತಿ, ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪುರಸ್ಕಾರ
ಸತತ ಮೂರು ಬಾರಿ ಕುಡ್ಲ ತುಳುಕೂಟ ಆಯೋಜನೆಯ ಶ್ರೀಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಪ್ರಶಸ್ತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಾಟಕ ವಿಭಾಗ ಪುರಸ್ಕೃತರು. ಕತೆಗಳು ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಗಳಿಗೆ ಅನುವಾದವಾಗಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ, ಮೈಸೂರು ದಸರಾ ಕವಿಗೋಷ್ಠಿ ಹಾಗೂ ಜಿಲ್ಲಾ ಅಬ್ಬಕ್ಕ ಉತ್ಸವಗಳಲ್ಲಿ ತುಳು ಭಾಷೆಯ ಕವಿಯಾಗಿ ಭಾಗವಹಿಸಿದ್ದಾರೆ.