ಅಕ್ಷತಾ ಪಾಂಡವಪುರ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರಂಗಭೂಮಿ ಕಲಾವಿದೆ. ಮೂಲತಃ ಮೇಲುಕೋಟೆ ಹತ್ತಿರವಿರುವ ಪಾಂಡವಪುರದವರಾದ ಇವ,ರು ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮುಗಿಸಿದರು. ನಂತರ ಸಾಗರ ತಾಲೂಕಿನ ನೀನಾಸಂನಲ್ಲಿ ರಂಗ ತರಬೇತಿ ಪಡೆದ ನಂತರ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಮೂರು ವರ್ಷಗಳ ಕಾಲ ರಂಗಭೂಮಿಯ ಆಗು-ಹೋಗುಗಳನ್ನು ಅರಿತುಕೊಂಡರು.