Geluvu Sadisuva Munna| ಗೆಲುವು ಸಾಧಿಸುವ ಮುನ್ನ

Geluvu Sadisuva Munna| ಗೆಲುವು ಸಾಧಿಸುವ ಮುನ್ನ

by Prajwala Shenoy Karkala · Inspirational

ಮುಖಬೆಲೆ (MRP) ₹150.00
ಬೆಲೆ (Price) ₹120.00
ರಿಯಾಯಿತಿ (Discount) 20%
ಸಾಗಣೆ (Shipping) ₹60.00
Order on WhatsApp

Estimated delivery by 30 Jun 2026


Book details
Author Prajwala Shenoy Karkala
Category Inspirational
Language Kannada
Publisher Pustaka Mane
ISBN 978-81-982715-6-3
Pages 136
Binding Paperback
Year published 2025
Dimensions 13.5 × 0.3 × 21 cm

About this book
ಪ್ರಜ್ವಲಾ ಶೆಣೈ ಅವರು ಶಿಕ್ಷಕಿ ಆಗಿ ಪ್ರಯೋಗಾತ್ಮಕವಾಗಿ ಕೆಲಸ ಮಾಡುವವರು. ಬರವಣಿಗೆ ಅವರ ಬಹಳ ದೊಡ್ಡ ಪ್ಯಾಶನ್, ಹಿಂದೆ ಬರೆದ ಎರಡು ಪುಸ್ತಕಗಳು ಯಶಸ್ವೀ ಆದ ಹಿನ್ನೆಲೆಯಲ್ಲಿ ಅವರು ತಮ್ಮ ಮೂರನೇ ಪುಸ್ತಕ 'ಗೆಲುವು ಸಾಧಿಸುವ ಮುನ್ನ' ಹೊರತಂದಿದ್ದಾರೆ. ಇದು ವಿವಿಧ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅವರು ಬರೆದ ಅಂಕಣ ಲೇಖನಗಳ ಸಂಗ್ರಹದ ಪುಸ್ತಕ. ಇಲ್ಲಿ 42 ಲೇಖನಗಳು ಸ್ಥಾನ ಪಡೆದಿವೆ. ಈ ಲೇಖನಗಳು ವೈಚಾರಿಕ ಕಮ್ ವ್ಯಕ್ತಿತ್ವ ವಿಕಸನದ ಗುಣವನ್ನು ಹೊಂದಿವೆ. ಇವುಗಳು ಬೇರೆ ಬೇರೆ ಸನ್ನಿವೇಶಗಳಲ್ಲಿ ಹುಟ್ಟು ಪಡೆದವುಗಳು. ಲೇಖಕಿಯ ಪಾಸಿಟಿವ್ ಮನಸ್ಥಿತಿಯ ಪ್ರತಿಬಿಂಬಗಳು. ಇಲ್ಲಿ ಸುಂದರವಾದ ಮತ್ತು ಥಟ್ಟನೆ ಸೆಳೆಯುವ ಶೀರ್ಷಿಕೆಗಳು ಇವೆ. ಅದನ್ನು ವಿವಿಧ ನಿದರ್ಶನ ಮತ್ತು ಬದುಕಿನ ಅನುಭವಗಳ ಮೂಲಕ ಕಟ್ಟಿ ಕೊಡಲಾಗಿದೆ. ಅವರ ಸರಳವಾದ ಬರವಣಿಗೆಯ ಹೆಣಿಗೆ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. 42 ಲೇಖನಗಳೂ ಧನಾತ್ಮಕ ಚಿಂತನೆ ಮತ್ತು ಬದುಕಿನ ಭರವಸೆಗಳನ್ನು ತುಂಬಿ ಕೊಡುತ್ತವೆ. ಉದಾಹರಣೆಗೆ ಅವರ 'ಗೆಲುವು ನಮ್ಮದೆ' ಲೇಖನವು ಬದುಕಿನ ಭರವಸೆಯ ಪ್ರತೀಕವಾಗಿ ನನಗೆ ಕಂಡುಬರುತ್ತದೆ. 'ಓ ಮನಸೇ, ನೀ ಕುಗ್ಗದಿರು' ಸೋತಿರುವ ಮನಸ್ಸಿಗೆ ಸಾಂತ್ವನದ ಮುಲಾಮನ್ನು ಹಚ್ಚುತ್ತದೆ. 'ನಾವೇಕೆ ಹೀಗೆ?' ಆತ್ಮಾವಲೋಕನದ ಗುಣವನ್ನು ಹೊಂದಿದೆ. 'ಓ ಮನವೇ, ನೀ ಮಾತಾಡು' ಶಕ್ತಿಶಾಲಿ ಸಂವಹನ ಮಾಧ್ಯಮವಾದ ಮಾತಿನ ಮಹತ್ವವನ್ನು ತೋರಿಸಿಕೊಡುತ್ತದೆ. 'ಬದಲಾಗಲಿ ಬದುಕು' ಏಕತಾನತೆಯ ಅಣೆಕಟ್ಟು ಒಡೆದು ಹೊಸ ಚೈತನ್ಯವನ್ನು ತುಂಬುವ ಲೇಖನವಾಗಿದೆ. 'ಹೊಸ್ತಿಲಿನ ಆಚೆ ಹೊಸ ಹೆಜ್ಜೆ' ನಮ್ಮನ್ನು ಒಂದು ಕ್ಷಣ ದಂಗುಪಡಿಸುವ ಲೇಖನ, ಸ್ವಾವಲಂಬನೆಯ ಅನಿವಾರ್ಯತೆಯನ್ನು ತೋರಿಸಿಕೊಡುವ ಲೇಖನವಿದು. 'ಋಣವಿದ್ದಷ್ಟೇ ಜೀವನ' ಬದುಕಿನ ವಾಸ್ತವಿಕತೆ ಮತ್ತು ಗಹನತೆಯನ್ನು ಎತ್ತಿ ತೋರಿಸುತ್ತದೆ. 'ಬಾಳೊಂದು ಭಾವಗೀತೆ' ಇನ್ನೊಂದು ಮೆಟ್ಟಿಲು ಮೇಲೆ ಹೋಗಿ ಬದುಕಿನ ಸೌಂದರ್ಯವನ್ನು ತೆರೆದು ತೋರಿಸುತ್ತದೆ. 'ಬಿದ್ದವರೇ ಎದ್ದವರು' ಲೇಖನದಲ್ಲಿ ಸೋತು ಗೆದ್ದವರ ಕಥೆಗಳು ಇವೆ ಪ್ರಜ್ವಲಾ ಶೆಣೈ ಅವರು ಬರೆದ ಲೇಖನಗಳನ್ನು ಓದುತ್ತಾ ಹೋಗುವಾಗ ನಮ್ಮ ಬದುಕಿನ ಬಗ್ಗೆ ಅಭಿಮಾನ ಮತ್ತು ಹೆಮ್ಮೆಗಳು ಮೂಡುತ್ತವೆ. ಪ್ರತೀ ಸಾಲುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ನಮ್ಮ ತಪ್ಪುಗಳನ್ನು ನಮ್ಮ ಮುಖಕ್ಕೆ ಹಿಡಿಯುತ್ತವೆ. ನಾನು ಈಗಾಗಲೇ ಹೇಳಿದ ಹಾಗೆ ಹೆಚ್ಚಿನ ಲೇಖನಗಳು ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತವೆ. ಯಶಸ್ಸಿನ ಕೈಮರಗಳಾಗುತ್ತವೆ. ದಾರಿ ತೋರಿಸುವ ಹಣತೆಗಳು ಆಗುತ್ತವೆ. ಲೇಖಕಿ ಯಾರದೋ ಬದುಕಿನ ಕಥೆಗಳನ್ನು ಹೆಕ್ಕುವುದಕ್ಕಿಂತ ತನ್ನದೇ ಬದುಕಿನ ಘಟನೆಗಳಿಂದ ಸ್ಫೂರ್ತಿಯನ್ನು ಪಡೆದು ಬರೆದ ಲೇಖನಗಳು ಇವು. ಒಂದು ರೀತಿಯಲ್ಲಿ ಸ್ವಗತದ ಧ್ವನಿ ಇದೆ. ಮಹಾ ಪುರುಷರ, ಲೆಜೆಂಡ್ಸ್ ಅಥವಾ ಐಕಾನಗಳ ಕಥೆಯನ್ನು ಅವರು ಹೆಚ್ಚು ಹೇಳಿಲ್ಲ. ಅವರು ಸಾಹಿತ್ಯದ ಗಂಭೀರವಾದ ಓದುಗರು ಆದ ಕಾರಣ ಇಲ್ಲಿ ಉಪಮೆಗಳು, ಅಲಂಕಾರಗಳು, ರೂಪಕಗಳು ಹೆಚ್ಚಿವೆ. ಅವೆಲ್ಲವೂ ಬದುಕಿನ ವಿಶ್ಲೇಷಣೆಯ ಉದ್ದೇಶವನ್ನು ಹೊಂದಿವೆ. ಮುಖವಾಡಗಳ, ಬಣ್ಣಗಳ ಬದುಕಿನಿಂದ ಹೊರಬರಬೇಕು ಎನ್ನುವ ತುಡಿತವು ಪ್ರತೀ ಲೇಖನದ ಅಂತರ್ಗತ ಆಶಯವಾಗಿದೆ. ಬದುಕು ಬದಲಿಸಲು ಹೊರಡುವ ಪ್ರತಿಯೊಬ್ಬರಿಗೂ ಈ ಪುಸ್ತಕ ಮಾರ್ಗದರ್ಶಿಯಾಗಿದೆ ಎಂದು ನನಗೆ ಅನ್ನಿಸುತ್ತಿದೆ. ಅವರದ್ದೇ ಆದ ಬರವಣಿಗೆಯ ಶೈಲಿ ಲೇಖಕಿಗೆ ಸಿದ್ದಿಸಿರುವುದು ನಿಜಕ್ಕೂ ಸಂತಸದ ವಿಷಯ.

You may also like